ಅದೊಂದು ಪ್ರೈವೇಟ್ ಕಂಪನಿ. ಅಲ್ಲಿನ ಬಾಸ್ ವಿಪರೀತ ಸಿಡಿಮಿಡಿಯ ಮನುಷ್ಯ. ಅವನೊಂದಿಗೆ ಕೆಲಸ ಮಾಡುತ್ತಿದ್ದ ನೌಕರರನ್ನು ಇನ್ನಿಲ್ಲದಂತೆ ಕಾಡಿದ್ದ. “ಅತೀ’ ಅನ್ನಿಸುವಂತಿದ್ದ ಅವನ “ಶಿಸ್ತಿ’ನಿಂದ ಎಲ್ಲ ನೌಕರರೂ ಸುಸ್ತೆದ್ದು ಹೋಗಿದ್ದರು. ಈ ಕಂಪನಿಯೂ ಬೇಡ. ಬಾಸ್‌ನ ಸಿಡಿಮಿಡಿಯೂ ಬೇಡ. ಆತ ಕೊಡುವ ಸಂಬಳವೂ ಬೇಡ ಎಂದು ಅದೆಷ್ಟೋ ಬಾರಿ ಅಂದುಕೊಂಡಿದ್ದರು. ಆದರೆ, ಒಮ್ಮೆ ಕೆಲಸ ಬಿಟ್ಟರೆ, ತಕ್ಷಣದಲ್ಲಿಯೇ ಬೇರೊಂದು ಕಡೆ ಕೆಲಸ ಸಿಗುವುದು ಕಷ್ಟವಿತ್ತು. ಹಾಗೆಂದೇ ಎಲ್ಲ ನೌಕರರೂ ಬಾಸ್‌ನ ಬೈಗುಳ ಮತ್ತು ಅವನ ಕಿರಿಕಿರಿಯನ್ನು ಸಹಿಸಿಕೊಂಡಿದ್ದರು.ಹೀಗಿದ್ದಾಗಲೇ ಅದೊಮ್ಮೆ ಬಾಸ್‌ಗೆ ಆರೋಗ್ಯ ಹದಗೆಟ್ಟಿತು. ಬಿ.ಪಿ. ಹೆಚ್ಚಿತು. ಶುಗರ್ ನಿಯಂತ್ರಣಕ್ಕೇ ಸಿಗಲಿಲ್ಲ. ದುಬಾರಿ ಚಿಕಿತ್ಸೆ ನೀಡಿದರೂ ಬಾಸ್ ಬದುಕಲಿಲ್ಲ. ನಾಲ್ಕು ದಿನಗಳ ನಂತರ ಅವನ ಮನೆಗೆ ಒಂದು ಫೋನ್ ಬಂತು. ಆ ಕಡೆಯಿಂದ ಮಾತಾಡಿದ ವ್ಯಕ್ತಿ- “ನಾನು ಬಾಸ್ ಜತೆ ಮಾತಾಡಬೇಕು. ನಾನು ಅವರ ಕಂಪನಿಯಲ್ಲಿ ಕೆಲಸ ಮಾಡುವ ನೌಕರ’ ಎಂದ.ದೂರವಾಣಿ ಕರೆ ಸ್ವೀಕರಿಸಿದಾಕೆ ಬಾಸ್‌ನ ಹೆಂಡತಿ. ಪಾಪ, ಈ ನೌಕರನಿಗೆ ಬಾಸ್ ಮೃತಪಟ್ಟ ಸುದ್ದಿ ತಿಳಿದಿಲ್ಲವೇನೋ ಅಂದುಕೊಂಡು- “ನಿಂಗೆ ಗೊತ್ತಿಲ್ವೇನಪ್ಪಾ, ನಿಮ್ಮ ಬಾಸ್ ತೀರಿಕೊಂಡು ಆಗಲೇ ನಾಲ್ಕು ದಿನ ಆಯ್ತು’ ಅಂದು ಫೋನ್ ಇಟ್ಟಳು. ಮರುದಿನ ಅದೇ ವ್ಯಕ್ತಿ ಮತ್ತೆ ಫೋನ್ ಮಾಡಿದ. ಆಗಲೂ ಬಾಸ್ ಹೆಂಡತಿಯೇ ಫೋನ್ ಎತ್ತಿಕೊಂಡು “ಹಲೋ’ ಎಂದಳು. ಈತ “ಬಾಸ್ ಜತೆ ಮಾತಾಡಬೇಕಿತ್ತಮ್ಮಾ. ನಾನು ಅವರ ಕಂಪನಿಯ ನೌಕರ’ ಎಂದ.ಬಾಸ್ ಹೆಂಡತಿಗೆ ನೌಕರನ ದನಿಯ ಪರಿಚಯ ತಕ್ಷಣವೇ ಗೊತ್ತಾಯಿತು. ಆದರೂ, ಬಾಸ್ ಮೇಲಿನ ಅಪಾರ ಪ್ರೀತಿಯಿಂದ ಒಂದು ರೀತಿಯ ಡಿಫ್ರೆಶನ್‌ಗೆ ಒಳಗಾಗಿ ಅವನು ಹೀಗೆ ಮಾಡುತ್ತಿರಬಹುದು ಅನ್ನಿಸಿ ಮತ್ತೆ ಹೇಳಿದಳು: “ನಿಮ್ಮ ಬಾಸ್ ಐದು ದಿನಗಳ ಹಿಂದೆ ತೀರಿಕೊಂಡರು ಕಣಪ್ಪಾ… ಸಾರಿ…’ಮರುದಿನ ಮತ್ತೆ ಅವನು ಫೋನ್ ಮಾಡಿದ. ಈಕೆ ಹಲೋ ಅಂದ ತಕ್ಷಣ “ನಾನು ಬಾಸ್ ಜತೆ ಮಾತಾಡಬೇಕಿತ್ತು’ ಅಂದ. ಈಕೆಗೆ ಸ್ವಲ್ಪ ಸಿಟ್ಟೇ ಬಂತು. ಆದರೂ ತಡೆದುಕೊಂಡು-“ಅವರು ವಾರದ ಹಿಂದೆ ತೀರಿ ಹೋದರು. ನಿಮಗೆ ಗೊತ್ತಿಲ್ವಾ’ ಎಂದು ಫೋನ್ ಇಟ್ಟಳು.ಈ ಭೂಪ ಅದರ ಮರುದಿನ ಮತ್ತೆ ಫೋನ್ ಮಾಡಿ- “ಬಾಸ್ ಜತೆ ಮಾತಾಡಬೇಕಿತ್ತೂ…. ನಾನು ಅವ ರ ಕಂಪನಿಯ ಕೆಲಸಗಾರ… ಎಂದು ಬಿಟ್ಟ. ಈಕೆಗೆ ಕೆಂಡಾಮಂಡಲ ಸಿಟ್ಟು ಬಂತು. ತಕ್ಷಣವೇ ಹೇಳಿದಳು- “ನಾನ್‌ಸೆನ್ಸ್, ನೀನು ನಾಲ್ಕು ದಿನದಿಂದಲೂ ಫೋನ್ ಮಾಡ್ತಾ ಇದೀಯ. ಬಾಸ್ ಇಲ್ಲ. ಅವರು ಸತ್ತು ಹೋದ್ರು ಅಂತ ನಾನು ದಿನಾ ದಿನ ಹೇಳ್ತಾನೇ ಇದೀನಿ. ಆದ್ರೂ ನೀನು ಫೋನ್ ಮಾಡೋದು ನಿಲ್ಲಿಸಿಲ್ಲ. ಯಾಕೆ ಹೀಗೆ ಮಾಡ್ತಾ ಇದೀಯ? ಮೊದಲು ಫೋನ್ ಇಡು…’ಈ ನೌಕರ ಹಹ್ಹಹ್ಹಹ್ಹಹಾ ಎಂದು ನಗುತ್ತಾ ಹೀಗೆಂದ: “ಅಮ್ಮಾವರೇ, ಬಾಸ್ ಜತೆ ಮಾತಾಡಬೇಕು ಅಂದ ತಕ್ಷಣ ನೀವು ಹೇಳ್ತೀರಲ್ಲ? ಆ ಮಾತು ಕೇಳಿದಾಗ ನಂಗೆ ಎಷ್ಟು ಖುಷಿಯಾಗುತ್ತೆ ಗೊತ್ತ?*
Filed under: ಸಾಹಿತ್ಯ ಮತ್ತು ಇತರೆ |
ನಿಮ್ಮದೊಂದು ಉತ್ತರ