ಬೇರೆ ಹುಡುಗೀರ್‍ನನೋಡಿದ್ರೆ ಅಷ್ಟೆ…

null

ಈ ಹಿಂದೆ ಒಬ್ಬ ಹುಡುಗ ಗುಲಾಬಿ ಕೊಟ್ಟಿದ್ದ. to be frank ಆಗ ನಂಗೆ ಪ್ರೀತಿ, ಪ್ರೇಮದ ಬಗ್ಗೆ ಆಸಕ್ತೀನೇ ಇರಲಿಲ್ಲ. ಹಾಗಂತ ಅವನ್ಗೆ ನೇರಾನೇರ ಹೇಳಿ ಕಳಿಸ್ದೆ….

ಹಿಂದಿನ ಸೀಟಲ್ಲಿ ಕುಳಿತವನೆ,ಎಷ್ಟು ಹೊತ್ತಿಗೆ ಮನೆ ಸೇರ್‍ದೆ? ಊಟ ಮಾಡಿದ್ಯಾ? ಮತ್ತೆ ಸಿಗರೇಟು ಸೇದಿದೆಯೋ ಹೇಗೆ? ಆಮೇಲೆ, ನಾಳೆ ಕೂಡ ಅದೇ ದೇವೇಗೌಡ ಪೆಟ್ರೋಲ್ ಬಂಕ್‌ನಿಂದ ವಿಜಯನಗರದ ತನಕ ನನ್ನ ಜತೆ ಅದೇ ಬಸ್ಸಲ್ಲಿ ಬರ್‍ತೀಯ ತಾನೆ?ಹೌದು ಕಣೋ. ನೀನು ವಾರದಿಂದ ನನ್ನ ಹಿಂದೆ ಬಿದ್ದಿದೀಯ. ನಾನು ಪ್ರತಿ ದಿನ ಏಳೂ ನಲವತ್ತರ ಬಸ್‌ಗೆ ಬನಶಂಕರಿಯಿಂದ ಬರ್‍ತೀನಿ ಅನ್ನೋದು ನಿಂಗೆ ಗೊತ್ತಾಗಿ ಹೋಗಿದೆ. ನಾನು ಎಡಗಡೆಯ ಸೀಟಲ್ಲಿ ಕೂತ್ಕೋತೀನಿ. ಬೈಛಾನ್ಸ್ ಬಸ್ಸು ವಿಪರೀತ ರಷ್ ಆಗಿದ್ರೆ ಐದನೇ ಸೀಟ್‌ಗೆ ಅಂಟಿಕೊಂಡ ಹಾಗೆಯೇ ನಿಂತ್ಕೋತೀನಿ ಅಂತ ನಿಂಗೆ ಗೊತ್ತಾಗಿ ಹೋಗಿದೆ. ಕಿಲಾಡಿ ನೀನು. ಬಸ್ಸು ಇನ್ನೂ ಸಿಗ್ನಲ್ ದಾಟುವಾಗ್ಲೇ ಅದರೊಳಗೆ ನಾನಿದೀನೋ ಇಲ್ವೋ ಅಂತ ಪತ್ತೆ ಮಾಡಿಬಿಡ್ತೀಯ. ದಡಬಡಿಸಿ ಬಸ್ ಹತ್ತಿ, ಅದು ಹೇಗೋ ನನ್ನ ಹಿಂದಿನ ಸೀಟು ದಕ್ಕಿಸಿಕೊಂಡು ಬಿಡ್ತೀಯ. ನಾನು ಆಕಸ್ಮಿಕವಾಗಿ ತಿರುಗಿ ನೋಡಿದ್ರೆ ಸಾಕು-ಛಕ್ಕನೆ ಕಣ್ಣು ಹೊಡೀತೀಯ. ಸ್ಮೈಲ್ ಕೊಡ್ತೀಯ. ಮಾತಾಡಲು ಪ್ರಯತ್ನ ಪಡ್ತೀಯ. “ಏನು’ ಅಂತೇನಾದ್ರೂ ನಾನು ಹುಬ್ಬು ಹಾರಿಸಿದ್ರೆ, ಏನೇನೂ ಗೊತ್ತಿಲ್ಲದವನ ಥರಾ ತಲೆ ತಗ್ಗಿಸಿ ಕೂತುಬಿಡ್ತೀಯ…ಹುಡುಗಾ, ನಂಗೆ ಅದ್ಯಾಕೋ ಗೊತ್ತಿಲ್ಲ. ನೀನು ಒಂಥರಾ ಇಷ್ಟವಾಗಿದೀಯ.

ಒಂದು ವಾರದ ಅವಧೀಲಿ ನಾನು ವಿಪರೀತ ಪರೀಕ್ಷೆ ಮಾಡಿದೀನಿ ಕಣೋ. ನೀನು ಫ್ಲರ್ಟ್ ಥರಾ ವರ್ತಿಸಲಿಲ್ಲ. ನನ್ನ ಮೈ ಮುಟ್ಟಲು, ಕೈ ಸವರಲು, ಕಾಲು ತುಳಿಯಲು, ಮೊಬೈಲ್ ನಂಬರ್ ಪತ್ತೆ ಹಚ್ಚಿ ಮಾತಾಡಲು ಪ್ರಯತ್ನಿಸಲಿಲ್ಲ. ಬಸ್ಸಲ್ಲಿ ವಿಪರೀತ ರಶ್ ಇದ್ದಾಗ ಕೂಡ ನೀನು ಒಂದು ಅಂತರ ಇಟ್ಟುಕೊಂಡೇ ನಿಂತಿರುತ್ತಿದ್ದೆ. ಬೇರೆ ಯಾರಿಂದಲೂ ನನಗೆ ತೊಂದರೆ ಒದಗದಂತೆ ನೋಡಿಕೊಂಡೆ. ಇದನ್ನೆಲ್ಲ ಗಮನಿಸಿ ಗಮನಿಸಿ ನಾನು-ವಾಹ್, ಈ ಹುಡುಗ ತುಂಬಾನೇ ಸಾಫ್ಟ್‌ಫೆಲೋ ಅಂದುಕೊಂಡು ಅದನ್ನೇ ನಿಂಗೆ ಹೇಳಬೇಕು ಅಂತ ಮೊನ್ನೆ ಕಾಯ್ತಿದ್ದೆನಲ್ಲ, ಆಗಲೇ ಆ ಡುಮ್ಮ ಹೊಟ್ಟೆಯ ಕಂಡಕ್ಟರ್ ತಾನು ಹೋಗುವ ಭರದಲ್ಲಿ ನನ್ನನ್ನ ಒಂದ್ಸಲ ಸುಮ್ನೆ ಹೀಗೆ ನೂಕಿಬಿಟ್ಟೆ- ಹೌದಲ್ವ ಇವನೇ, ಆಗ ಆಕಸ್ಮಿಕವಾಗಿ ನಿನ್ನ ಕೈ ನನ್ನ ಹೆಗಲು ತಾಕಿತು. ಅಷ್ಟೇ ಆಕಸ್ಮಿಕವಾಗಿ ನನ್ನ ಕಂಕುಳನ್ನೂ…ಮೆಲ್ಲನೆ ನೀ ಬಂದು ನನ್ನ ಮೈಮುಟ್ಟಿದೇನಲ್ಲೆಯ ಈ ಮನ ಝಲ್ಲೆಂದಿದೇ…ಹಾಗಾಗಿ ಬಿಡ್ತು ಕಣೋ ನಂಗೆ. ನೀನು ತಕ್ಷಣವೇ ಮೂರು ಬಾರಿ ಸಾರಿ ಕೇಳ್ದೆ-ಮೊನ್ನೆ ಮತ್ತೆ ಉಳಿದ ಯಾರಿಗೂ ಕೇಳಿಸದ ಧ್ವನಿಯಲ್ಲಿ “ಸಾರಿ’ ಅಂದುಬಿಟ್ಟೆ. ನಿನ್ನ ಈ ವರ್ತನೆ ನಂಗೆ ಎಷ್ಟೊಂದು ಖುಷಿಕೊಡ್ತು ಗೊತ್ತಾ?ಇರಲಿ, ನಂಗೆ ಇಷ್ಟವಾಗದ ಗುಣಗಳೂ ಒಂದೆರಡಿವೆ. ನೀನು ವಿಪರೀತ ಸಿಗರೇಟು ಸೇದ್ತೀಯ ಅಂತ ಕಾಣುತ್ತೆ. ಶಿಸ್ತಿಲ್ಲದೆ ಬದುಕ್ತಿದೀಯ ಅನಿಸುತ್ತೆ. ಇದಕ್ಕಿಂತ ಹೆಚ್ಚಾಗಿ ಚೆಂದದ ಹುಡುಗೀರನ್ನು ರೆಪ್ಪೆ ಬಡಿಯದೆ ನೋಡ್ತಾ ಇರ್‍ತೀಯ. ಇದೆಲ್ಲ ಸರೀನಾ? ನಾನು ನಿನ್ನನ್ನು ಒಪ್ಕೋಬೇಕು, ಪ್ರೀತಿಸಬೇಕು, ನಿನ್ನೊಂದಿಗೆ ವರ್ಷವಿಡೀ ಅದೇ ಬಸ್ಸಲ್ಲಿ ದಿನಾ ದಿನ ಬನಶಂಕರಿಯಿಂದ ವಿಜಯನಗರಕ್ಕೆ ಬರ್‍ತಾನೇ ಇರಬೇಕು. ೪೧೦ ನಂಬರಿನ ಬಸ್ಸು ನಮ್ಮ ಮಧುರ ಪ್ರೇಮಕ್ಕೆ ಸಾಕ್ಷಿಯಾಗಬೇಕು ಅನ್ನೋದೇ ನಿನ್ನ ಆಸೆಯಾಗಿದ್ರೆ-ಪ್ಲೀಸ್, ಸಿಗರೇಟು ಬಿಡು. ಸ್ವಲ್ಪ ಶಿಸ್ತು ಬೆಳೆಸ್ಕೋ. ಹುಡುಗೀರನ್ನ ಆಸೆಯಿಂದ ನೋಡುವುದನ್ನು ಕಡಿಮೆ ಮಾಡು..

ಅಂದ ಹಾಗೆ, ನನ್ನ ವಿವರ ಗೊತ್ತಾಯ್ತೇನೋ ಹುಡುಗಾ? ನನ್ನ ಹೆಸರು ಮಾಧವಿ. ಇಲ್ಲೇ ಸಾರಕ್ಕಿಯವಳು ನಾನು. ಸೆಕೆಂಡ್ ಇಯರ್ ಡಿಗ್ರೀಲಿದೀನಿ. ಈ ಹಿಂದೆ ಒಬ್ಬ ಹುಡುಗ ಗುಲಾಬಿ ಕೊಟ್ಟಿದ್ದ. ಖಿo be ಜಿಡಿಚಿಟಿಞ, ಆಗ ನಂಗೆ ಪ್ರೀತಿ, ಪ್ರೇಮದ ಬಗ್ಗೆ ಆಸಕ್ತೀನೇ ಇರಲಿಲ್ಲ. ಹಾಗಂತ ಅವನ್ಗೆ ನೇರಾನೇರ ಹೇಳಿ ಕಳಿಸ್ದೆ. ಆದ್ರೆ ಬರೀ ಒಂದೇ ಒಂದು ವಾರದಲ್ಲಿ ನನ್ನ ಹಿಂದಿನ ಸೀಟಲ್ಲಿ ಕೂತು ನನ್ನನ್ನು ಪಟಾಯಿಸಿಬಿಟ್ಟೆಯಲ್ಲ? ನೀನು ನೆನಪಾದಾಗಲೆಲ್ಲ-ನೀನೆ ನೀನೆ ನನಗೆಲ್ಲ ನೀನೆಮಾತು ನೀನೆ ಮನಸೆಲ್ಲಾ ನೀನೆನನ್ನ ಮನದ ತುಂಬಾ ನಿನ್ನ ಪ್ರೀತಿ ತಾನೆ… ಹಾಡು ನೆನಪಾಗುತ್ತೆ. ನಿಂಗೂ ಹೀಗೇ ಆಗ್ತದಾ? ನಾಳೆ ಸಿಕ್ತೀಯಲ್ಲ,……… ಉತ್ತರ ಹೇಳು.-ಬಸ್ ಗೆಳತಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: